ಚೊಕ್ಕ ಚುನಾವಣಾ ಅಭಿಯಾನ
ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ - ಜನಾಂದೋಲನ
ಮಾರ್ಚ್ - ಏಪ್ರಿಲ್ - 2013
ಕರ್ನಾಟಕ ರಾಜ್ಯದಲ್ಲಿ ಪ್ರಜಾತಂತ್ರ ನೆಲೆಯಲ್ಲಿ ಚೊಕ್ಕ ಚುನಾವಣೆಗಾಗಿ ರಾಜ್ಯವ್ಯಾಪಿ ಪ್ರಚಾರಾಂದೋಲನ ನಡೆಸುವ ಸಲುವಾಗಿ ಸಮಾನ ಮನಸ್ಕರು ಹಾಗೂ ಸಂಸ್ಥೆಗಳ ಸಹಭಾಗಿತ್ವದಲ್ಲಿ "ಚೊಕ್ಕ ಚುನಾವಣಾ ಅಭಿಯಾನ" ರೂಪುಗೊಂಡಿತು. ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತವಾದ, ನ್ಯಾಯಯುತವಾದ, ಪ್ರಜಾಪ್ರಭುತ್ವದ ನಿಜ ಅರ್ಥದಲ್ಲಿ ಚುನಾವಣೆಗಳು ನಡೆಯುವುದು ಪ್ರಜೆಗಳ ಹಕ್ಕು ಎನ್ನುವ ವಿಚಾರಕ್ಕೆ "ಚೊಕ್ಕ ಚುನಾವಣಾ ಅಭಿಯಾನ" ಬದ್ಧವಾಗಿದೆ. ಕರ್ನಾಟಕ ರಾಜ್ಯದ 2013ರ ಚುನಾವಣೆಯಲ್ಲಿ "ಪರಿಣಾಮಕಾರಿ ಪರಿವರ್ತನೆ"ಯನ್ನು ಆಚರಣೆಗೆ ತರಲು, ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಈ ಅಭಿಯಾನ ತೊಡಗಿದೆ. ಚೊಕ್ಕ ಚುನಾವಣಾ ಅಭಿಯಾನದ ಭಾಗವಾಗಿ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ಬೇರೆ ಬೇರೆ ಸಮಾನ ಮನಸ್ಕ ಸಂಸ್ಥೆಗಳು, ಮಹಿಳಾ ಗುಂಪುಗಳು, ಯುವಗುಂಪುಗಳು ಹಾಗೂ ಸಮುದಾಯದವರಿಂದೊಡಗೂಡಿ
ಕರ್ನಾಟಕ ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಲ್ಲಿ "ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ" ಜನಾಂದೋಲನವನ್ನು ನಡೆಸಿತು.